Index   ವಚನ - 108    Search  
 
ಮೂರು ಲೋಕವನೆಲ್ಲವ ಗಾಳಿಯಲ್ಲಿ ತೂರಿ ಬಂದ ಗುಂಗುರು ನುಂಗಿತ್ತು. ಮೂರು ಲೋಕದ ರಾಯರು ಕೂಡಿ ಗುಂಗುರ ಕೊಂದಹೆನೆಂದಡೆ, ಆರಿಗೂ ಅಸಾಧ್ಯ. ಆ ಗುಂಗುರ ಬಾಯಲ್ಲಿ ಕತ್ತರಿವಾಣಿ, ಕಾಲಿನಲ್ಲಿ ಕಂಡೆಹ, ಅಂಡದಲ್ಲಿ ಕಾಳಕೂಟ, ಪಿಂಡವೆಲ್ಲವೂ ಅಸಿಯ ಬಳಗ. ಅದ ಕೊಂದು ನಿಂದವಗಲ್ಲದೆ ಸದಾಶಿವಮೂರ್ತಿಲಿಂಗದ ಬೆಳಗಿಲ್ಲ.