ಕ್ರೀಯಲ್ಲಿ ಕಾಬುದ ಕ್ರೀಯಲ್ಲಿ ಕಂಡು,
ಅರಿಕೆಯಲ್ಲಿ ಕಾಬುದ ಅರಿವಿನಲ್ಲಿ ಕಂಡು,
ಮುಳ್ಳು ತಾಗಿದಡೆ ಮೊನೆಯಿಂದ ಕಳೆವಂತೆ,
ತನ್ನಯ ಮರವೆಯ ತನ್ನ ಅರಿವಿನಿಂದ ಅರಿದು,
ಸದಾಶಿವಮೂರ್ತಿಲಿಂಗದ ಕುರುಹಡಗಿತ್ತು.
Art
Manuscript
Music
Courtesy:
Transliteration
Krīyalli kābuda krīyalli kaṇḍu,
arikeyalli kābuda arivinalli kaṇḍu,
muḷḷu tāgidaḍe moneyinda kaḷevante,
tannaya maraveya tanna arivininda aridu,
sadāśivamūrtiliṅgada kuruhaḍagittu.