Index   ವಚನ - 153    Search  
 
ಮಹಾಧರೆಯಲ್ಲಿ ಮನೆಯ ಕಟ್ಟುವುದಕ್ಕೆ, ಕಾವಿಲ್ಲದ ಕೊಡಲಿಯಲ್ಲಿ, ಹುಟ್ಟದ ಮರನ ತರಿದು, ಎತ್ತಿಲ್ಲ[ದೆ] ಏರಿನಲ್ಲಿ ಹೂಡಿ ತಂದವನಿವನಾರಣ್ಣಾ? ನಾನೆಂಬುದಕ್ಕೆ ಮೊದಲೆ ನಾಮ ನಷ್ಟವಾಯಿತ್ತು. ಸದಾಶಿವಮೂರ್ತಿಲಿಂಗ ಅಲ್ಲಿ ಸತ್ತು, ಇಲ್ಲಿ ಹೆಣನಾಯಿತ್ತು.