ಅಪ್ಪು ಮಣ್ಣು ಕೂಡಿ ಘಟವಾದಂತೆ,
ಚಿತ್ತು ಶಕ್ತಿ ಕೂಡಿ ಎನಗೆ ಇಷ್ಟವಾಗಿ ಬಂದು ನಿಂದೆಯಲ್ಲಾ!
ಚಿತ್ರ ನಿಲುವುದಕ್ಕೆ ಗೊತ್ತಾಗಿ,
ಗೊತ್ತಿನ ಮರೆಯಲ್ಲಿ ನಾ ಹೊತ್ತ
ಸಕಲೇಂದ್ರಿಯವನೀಸೂವುದಕ್ಕೆ ತೆಪ್ಪವಾಗಿ
ಭವಸಾಗರವ ದಾಂಟಿಸಿದೆಯಲ್ಲಾ!
ಭಕ್ತಿಪ್ರಿಯ ಸತ್ಯಕರಂಡಮೂರ್ತಿ
ಸದಾಶಿವಮೂರ್ತಿಲಿಂಗವೆ ಎನ್ನಂಗದಲ್ಲಿ ಹಿಂಗದಿರು.
Art
Manuscript
Music
Courtesy:
Transliteration
Appu maṇṇu kūḍi ghaṭavādante,
cittu śakti kūḍi enage iṣṭavāgi bandu nindeyallā!
Citra niluvudakke gottāgi,
gottina mareyalli nā hotta
sakalēndriyavanīsūvudakke teppavāgi
bhavasāgarava dāṇṭisideyallā!
Bhaktipriya satyakaraṇḍamūrti
sadāśivamūrtiliṅgave ennaṅgadalli hiṅgadiru.