ಗಂಧವೊಂದೆಂದಡೆ ಹಲವು ವಾಸನೆಯ ಕುಸುಮದಲ್ಲಿ ಸಿಕ್ಕಿ,
ವಾಸನೆ ಭಿನ್ನವಾಗಿ ತೋರುವಂತೆ,
ಆತ್ಮನೊಂದೆಂದಡೆ, ಹಲವು ಘಟದಲ್ಲಿ ಸಿಕ್ಕಿ,
ಅವರವರ ನೆಲಹೊಲಂಗಳಲ್ಲಿ ಸಿಕ್ಕಿ,
ಫಲಭೋಗಂಗಳಿಗೆ ಒಳಗಾಯಿತ್ತು.
ಆತ್ಮನ ಒಲವರವೊಂದೆನಬಹುದೆ?
ಸುಗಂಧಕ್ಕೂ ದುರ್ಗಂಧಕ್ಕೂ ಒಂದೆ ವಾಯು.
ಅರಿವಾತ್ಮವೊಂದೆಂದಡೆ,ಉಭಯವನರಿಯಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Gandhavondendaḍe halavu vāsaneya kusumadalli sikki,
vāsane bhinnavāgi tōruvante,
ātmanondendaḍe, halavu ghaṭadalli sikki,
avaravara nelaholaṅgaḷalli sikki,
phalabhōgaṅgaḷige oḷagāyittu.
Ātmana olavaravondenabahude?
Sugandhakkū durgandhakkū onde vāyu.
Arivātmavondendaḍe,ubhayavanariyabēku,
sadāśivamūrtiliṅgavanarivudakke.