ಯೋಗದಲ್ಲಿ ಕಾಬುದು ಶರೀರಕ್ಕೆ ಹೊರಗು.
ಕರ್ಮದಲ್ಲಿ ಕಾಬುದು ಸಂಕಲ್ಪಕ್ಕೆ ಹೊರಗು.
ಬಟ್ಟಬಯಲಲ್ಲಿ ಕಾಬುದು ಲಕ್ಷಕ್ಕೆ ಹೊರಗು
ಉಭಯದ ಸಂದನಳಿದು ನಿಂದಲ್ಲಿ
ಸದಾಶಿವಮೂರ್ತಿಲಿಂಗಕ್ಕೆ ಒಳಗು.
Art
Manuscript
Music
Courtesy:
Transliteration
Yōgadalli kābudu śarīrakke horagu.
Karmadalli kābudu saṅkalpakke horagu.
Baṭṭabayalalli kābudu lakṣakke horagu
ubhayada sandanaḷidu nindalli
sadāśivamūrtiliṅgakke oḷagu.