Index   ವಚನ - 241    Search  
 
ಮತಿಯಿಂದ ಕಾಬುದು ಚಿತ್ತದ ಹಂಗು, ಪೂಜೆಯಿಂದ ಕಾಬುದು ಪುಣ್ಯದ ಹಂಗು. ಉಭಯವನಳಿದು ಕಾಬುದಕ್ಕೆ, ಚಿತ್ತ ನೆಮ್ಮುವುದಕ್ಕೆ ಗೊತ್ತಿಲ್ಲ, ಏನೂ ಎನಬಾರದುದಕ್ಕೆ, ಸದಾಶಿವಮೂರ್ತಿಲಿಂಗವನರಿವುದಕ್ಕೆ ಠಾವ ಕೇಳಾ?