Index   ವಚನ - 242    Search  
 
ಬಯಲ ಬಯಲ ನೋಡಿ ಕಾಬುದಿನ್ನೇನು? ರೂಪ ರೂಪ ನೋಡಿ ಕಾಬುದಿನ್ನೇನು? ರೂಪ ಹಿಡಿಯಬಾರದು, ಬಯಲನರಿಯಬಾರದು. ಬಯಲು ರೂಪಿಂಗೆ ಹೊರಗು, ರೂಪು ಬಯಲಿಂಗೆ ಹೊರಗು. ಉಭಯವನರಿತಲ್ಲಿ ಸದಾಶಿವಮೂರ್ತಿಲಿಂಗಕ್ಕೆ ಒಳಗು.