Index   ವಚನ - 255    Search  
 
ಯೋನಿಜನಾಗಿ ದಶ ಅವತಾರಕ್ಕೆ ಒಳಗಾದಲ್ಲಿ ದೇವಪದ ಹಿಂಗಿತ್ತು. ನಾಭಿ ಅಂಬುಜದಲ್ಲಿ ಹುಟ್ಟಿ ಪಿತಭವಕ್ಕೆ ಬಾಹಾಗ ಸುತಂಗೆ ಸುಖವಿಲ್ಲವಾಗಿ ಬ್ರಹ್ಮಪದ ನಿಂದಿತ್ತು. ಸಂಹಾರಕಾರಣನಾಗಿ ಕಪಾಲಶೂಲನಾಟ್ಯಾಡಂಬರನಾಗಿ ಇದ್ದುದರಿಂದ, ಈಶ್ವರಪದ ನಿಂದು ರುದ್ರಪದವಾಯಿತ್ತು. ಇಂತೀ ತ್ರಿವಿಧವನರಿದು ತೊಲಗಿ ನಿಂದಲ್ಲಿ ಸದಾಶಿವಮೂರ್ತಿಲಿಂಗದ ನೆಲೆಯಾಯಿತ್ತು.