ಪೃಥ್ವಿ ಅಪ್ಪು ತೇಜ ವಾಯು ಆಕಾಶ ಪಂಚಭೌತಿಕಕ್ಕೆ
ಮುನ್ನವೆ ವಿಷ್ಣುಮಯ ಹುಟ್ಟಿದ ಠಾವಾವುದು?
ಕಾಲಾಂಧರ ಕಲ್ಪಿತಕ್ಕೆ ಮುನ್ನವೆ ಬ್ರಹ್ಮನ ಉತ್ಪತ್ಯದ ನೆಲೆ ಯಾವುದು?
ರೂಪು ನಿರೂಪಿಗೆ ಮುನ್ನವೆ ರುದ್ರನ ಲೀಲಾಭಾವವಾದ ಠಾವಾವುದು?
ಇಂತಿವೆಲ್ಲವು ಅನಾದಿ ವಸ್ತು ಆದಿಶಕ್ತಿಯ ಈ ಈಚೆಯಿಂದಾದ
ದೇವವರ್ಗ ಸಂತತಿ.
ಯುಗಜುಗಂಗಳಲ್ಲಿ ಪರಿಭ್ರಮಣಕ್ಕೆ ತಿರುಗುವುದಕ್ಕೆ ಒಡಲಾಯಿತ್ತು.
ಇಂತೀ ಭೇದಂಗಳನರಿತು ಘನಕಿರಿದಿಂಗೆ ತೆರಪುಂಟೆ ಅಯ್ಯಾ?
ಸೂರಾಳ ವಿರಾಳ ನಿರಾಳಕ್ಕೆ ಮುನ್ನವೆ ಅಭೇದ್ಯ ಅಗೋಚರಮಯ
ಲೋಕಕ್ಕೆ ಸದಾಶಿವಮೂರ್ತಿಲಿಂಗವೊಂದೆಯಲ್ಲದೆ
ಹಲವು ಇಲ್ಲಾ ಎಂದೆ.
Art
Manuscript
Music
Courtesy:
Transliteration
Pr̥thvi appu tēja vāyu ākāśa pan̄cabhautikakke
munnave viṣṇumaya huṭṭida ṭhāvāvudu?
Kālāndhara kalpitakke munnave brahmana utpatyada nele yāvudu?
Rūpu nirūpige munnave rudrana līlābhāvavāda ṭhāvāvudu?
Intivellavu anādi vastu ādiśaktiya ī īceyindāda
dēvavarga santati.
Yugajugaṅgaḷalli paribhramaṇakke tiruguvudakke oḍalāyittu.
Intī bhēdaṅgaḷanaritu ghanakiridiṅge terapuṇṭe ayyā?
Sūrāḷa virāḷa nirāḷakke munnave abhēdya agōcaramaya
lōkakke sadāśivamūrtiliṅgavondeyallade
halavu illā ende.