Index   ವಚನ - 299    Search  
 
ಏಕಮೂರ್ತಿತ್ರಯೋಭಾಗವಾದುದ ತಾನರಿತ ಮತ್ತೆ, ತಾನಾರಾಧಿಸುವ ವಸ್ತು ಶುದ್ಧತೆ ಆದಾಗ ತಾ ಶುದ್ಧವಾಯಿತ್ತೆಂಬುದಕ್ಕೆ ಪ್ರಸಿದ್ಧ. ಆ ತ್ರಿವಿಧ ತನ್ನಯ ಭಾವಮೂರ್ತಿ ಆದ ಕಾರಣ, ಹೇಳಿದೆ ಕೇಳಿದೆನೆಂಬುದಿಲ್ಲ, ಆ ಅಂಗ ಸದಾಶಿವಮೂರ್ತಿಲಿಂಗವು ತಾನೆ.