•  
  •  
  •  
  •  
Index   ವಚನ - 443    Search  
 
ಮಣ್ಣಿಲ್ಲದ ಹಾಳ ಮೇಲೆ, ಕಣ್ಣಿಲ್ಲದಾತ ಮಣಿಯ ಕಂಡ, ಕೈಯಿಲ್ಲದಾತ ಪವಣಿಸಿದ, ಕೊರಳಿಲ್ಲದಾತ ಕಟ್ಟಿಕೊಂಡ! ಅಂಗವಿಲ್ಲದ ಸಿಂಗಾರಕ್ಕೆ ಭಂಗವುಂಟೆ ಗುಹೇಶ್ವರಾ?
Transliteration Maṇṇillada hāḷa mēle, kaṇṇilladāta maṇiya kaṇḍa, kaiyilladāta pavaṇisida, koraḷilladāta kaṭṭikoṇḍa! Aṅgavillada siṅgārakke bhaṅgavuṇṭe guhēśvarā?
Hindi Translation बिना मिट्टी की भूमी पर बिना आँखोवाला पहना देखा; बिना हाथवाला पिरोया; बिना गलेवाला पहना! अंग रहित शृंगार का भंग है क्या गुहेश्वरा ? Translated by: Eswara Sharma M and Govindarao B N
Tamil Translation மண்ணற்ற நிலத்திலே கண்ணற்ற மணியைக் கண்டேன் கையற்ற அவன் மெய்மறந்திருந்தான் கழுத்தற்ற அவன் கட்டிக் கொண்டான் உடலற்ற அழகிற்கு கேடு உண்டோ குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗವಿಲ್ಲದ = ಲೌಕಿಕವಲ್ಲದ, ಪಾರಮಾರ್ಥಿಕವಾದ; ಅವನೀಗ ಪವಣಿಸಿದ = ತಾನು ಕಂಡ ಜ್ಯೋತಿರ್ಮಯಲಿಂಗದ ನೋಟ ಹಾಗೂ ನೆನಹಿನಲಿ ನಿಮಗ್ನನಾದ; ಇದಕ್ಕೆ ಭಂಗವುಂಟೆ? = ಈ ಶೃಂಗಾರಕ್ಕೆ ಭಂಗವೆಂಬುದಿಲ್ಲ, ಎಂದೆಂದಿಗೂ ಉಳಿವ ಅನುಭವಾಲಂಕರಣವಿದು; ಇಲ್ಲದಾತ = ಜೀವಭಾವವಿಲ್ಲದ ಶರಣ; ಕಂಡ = ದರ್ಶಿಸಿದ; ಕಟ್ಟಿಕೊಂಡ = ಆ ನಿಷ್ಕಲಲಿಂಗವನು ಧರಿಸಿದ, ಅದರಲ್ಲಿ ಬೆರೆತು ಒಂದಾದ; ಕಣ್ಣಿಲ್ಲದಾತ = ಬಾಹ್ಯದೃಷ್ಟಿಯಿಲ್ಲದವ, ಅಂತದೃಷ್ಟಿಯುಳ್ಳವ, ಶರಣ; ಕೈಯಿಲ್ಲದಾತ = ಆ ಶರಣನು ಕೈಯಿಲ್ಲದವ, ಪ್ರಾಪಂಚಿಕ ವ್ಯವಹಾರಗಳಳಿದು ನಿಷ್ಪ್ರಪಂಚಿಯಾದವ ಅವನ ಬಾಹ್ಯಕ್ರಿಯಾವರ್ತನೆಯೆಲ್ಲ ನಿಂತುಹೋಗಿವೆ; ಕೊರಳು = ಕಂಠ, ಪ್ರಾಣದ ತಾಣ, ಜೀವಭಾವಕ್ಕೆ ಸಂಕೇತ; ಮಣಿಯ = ಸ್ವಯಂಜ್ಯೋತಿರ್ಮಯಲಿಂಗವನು; ಮಣ್ಣಿಲ್ಲದ = ಜಡಭಾವಗಳು ಕ್ಲೇಶಗಳು ಹಾಗೂ ಭಿನ್ನವೃತ್ತಿಗಳಿಲ್ಲದ ; ಸಿಂಗಾರ = ಶೃಂಗಾರವಿದು; ಹಾಳ ಮೇಲೆ = ಚಿತ್ತಭೂಮಿಯಲ್ಲಿ; Written by: Sri Siddeswara Swamiji, Vijayapura