•  
  •  
  •  
  •  
Index   ವಚನ - 444    Search  
 
ಕಾಮಿಸದೆ ನೆನೆದಡೆ, ಕಲ್ಪಿತವಿಲ್ಲದ ಪುರುಷ ಬಂದನೆನಗೆ ನೋಡವ್ವಾ! ಕಲ್ಪಿತವಿಲ್ಲದೆ ನೆನೆದಡೆ, ಭಾವಿಸಲಿಲ್ಲದ ಸುಖವು ದೊರಕಿತ್ತು ನೋಡವ್ವಾ! ಗುಹೇಶ್ವರನೆಂಬ ಲಿಂಗವನರಿದ ಬಳಿಕ, ನಾನೀನೆಂಬುದಿಲ್ಲ ನೋಡಾ!
Transliteration Kāmisade nenedaḍe, kalpitavillada puruṣa bandanenage nōḍavvā! Kalpitavillade nenedaḍe, bhāvisalillada sukhavu dorakittu nōḍavvā! Guhēśvaranemba liṅgavanarida baḷika, nānīnembudilla nōḍā!
Hindi Translation बिना इच्छा ध्यान करे कल्पना रहित पुरुष मुझे मिला देखो! अनित्य से मिले तो बिना कल्पित सुख मिला देखो! गुहेश्वर नामक लिंग जानने के बाद मैं तुम नहीं देखो! Translated by: Eswara Sharma M and Govindarao B N
Tamil Translation பற்றற்று நினையின் மெய்ப்பொருள் என் அகத்திலே எழுகிறது காணாய்! கற்பிதமற்று நினையின் ஒப்பற்ற இன்பம் ஏற்பட்டது காணாய்! குஹேசுவரனெனும் இலிங்கதை அறிந்த பின்னர் நீ, நான் என்பது இல்லை காணாய்! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿದ ಬಳಿಕ = ತಾನೇ ಎಂದು ಅನುಭಾವದಿಂದ ಅರಿದ ಬಳಿಕ; ಇಲ್ಲದೆ = ಇರದೆ; ಕಲ್ಪಿತವಿಲ್ಲದ = ನಿತ್ಯಸತ್ಯನಾದ; ಕಲ್ಪಿತವು = ನಿತ್ಯವಲ್ಲದುದು; ದೇಹೇಂದ್ರಿಯಾದಿಗಳು, ಆ ದೇಹೇಂದ್ರಿಯಾದಿಗಳಲ್ಲಿರುವ ಅಭಿಮಾನ-ಅನುರಾಗ; ಕಾಮಿಸದೆ = ಪ್ರಾಪಂಚಿಕವಾದ ಯಾವ ಅಭಿಲಾಷೆಯನ್ನೂ ಇಟ್ಟುಕೊಳ್ಳದೆ; ದೊರಕಿತ್ತು = ಲಭಿಸಿತ್ತು; ನೀನಾನೆಂಬುದಿಲ್ಲ = (ಇವನು) ನೀನು ದೇವ, ನಾನು ಧ್ಯಾತೃ-ಎಂಬ ಉಭಯ ಭಾವನೆಗಳು ಉಳಿಯವು; ನೆನೆದಡೆ = ಭಕ್ತಿಭಾವದಿಂದ ಸ್ಮರಿಸಿದರೆ; ನೆರೆದಡೆ = ಆ ದೇವನೊಂದಿಗೆ ಅನುಸಂಧಾನಗೈದರೆ; ಪುರುಷ = ಪರಮ ಪುರುಷನು(ಲಿಂಗದೇವನು); ಬಂದನೆನಗೆ = ನನ್ನೊಳಗೆ ಕಾಣಿಸಿಕೊಳ್ಳುತ್ತಾನೆ; ಭಾವಿಸಲಿಲ್ಲದ = ಅಪ್ರತಿಮವಾದ; ಲಿಂಗವನು = ಸರ್ವಾಂತರ್ಯಾಮಿಯೂ ಪರಮಪುರುಷನೂ ಪರಮಾನಂದರೂಪನೂ ಆದ ದೇವನನ್ನು.; ಸುಖವು = ಪರಮ ಆನಂದವು; Written by: Sri Siddeswara Swamiji, Vijayapura