Index   ವಚನ - 56    Search  
 
ಲಿಂಗಭಕ್ತ ಗುರುಪ್ರಸಾದವ ಕೊಳಲಿಲ್ಲ, ಜಂಗಮಭಕ್ತ ಲಿಂಗಪ್ರಸಾದವ ಕೊಳಲಿಲ್ಲ, ಮಹಾಭಕ್ತ ಜಂಗಮಪ್ರಸಾದವ ಕೊಳಲಿಲ್ಲ, ನೇಮದ ಕೃತ್ಯದ ಮಹಾವ್ರತಿ ಗಣಪ್ರಸಾದವ ಕೊಳಲಿಲ್ಲ. ಅದೆಂತೆಂದಡೆ: ಗುರುಭಕ್ತಂಗೆ ಗುರುವಿನಲ್ಲಿಯೆ ಮುಕ್ತಿ, ಲಿಂಗಭಕ್ತಂಗೆ ಲಿಂಗದಲ್ಲಿಯೆ ಮುಕ್ತಿ, ಜಂಗಮಭಕ್ತಂಗೆ ಜಂಗಮದಲ್ಲಿಯೆ ಮುಕ್ತಿ. ಮಹಾಭಕ್ತಂಗೆ ಶರಣರಲ್ಲಿಯೆ ಮುಕ್ತಿ ಸಂಬಂಧ. ಇಂತೀ ಸಮಯ ಗಣಸಮೂಹ ಕೂಡಿದಲ್ಲಿ ಆ ಕಾರುಣ್ಯವೆ ಮಹಾಮುಕ್ತಿ. ಆ ಮುಕ್ತಿಯೆ ಅವಿಮುಕ್ತಿಕ್ಷೇತ್ರಂಗಳಾದಲ್ಲಿ ಪ್ರಸನ್ನಪ್ರಸಾದವಾಯಿತ್ತು. ಆ ಲಿಂಗವ್ರತದಂಗವ ತಾಳಲಾಗಿ ಏಲೇಶ್ವರಲಿಂಗವು ಸರ್ವಶೀಲವಂತನಾದ.