•  
  •  
  •  
  •  
Index   ವಚನ - 456    Search  
 
ಅಮೃತ ಸೇವನೆಯ ಮಾಡಿ ಆಪ್ಯಾಯನ ಘನವಾಯಿತ್ತು. ಪರುಷವೇದಿಯ ಸಾಧಿಸ ಹೋದಡೆ ದಾರಿದ್ರ್ಯ ಘನವಾಯಿತ್ತು. ಮರುಜೇವಣಿಯ ಹಣ್ಣ ಮೆದ್ದು, ಮರಣವಾಯಿತ್ತ ಕಂಡೆ. ಎಲ್ಲವನೂ ಸಾಧಿಸ ಹೋದಡೆ ಏನೂ ಇಲ್ಲದಂತಾಯಿತ್ತು. ನಾನು ನಿಜವ ಸಾಧಿಸಿ ಬದುಕಿದೆನು ಗುಹೇಶ್ವರಾ.
Transliteration Amr̥ta sēvaneya māḍi āpyāyana ghanavāyittu. Paruṣavēdiya sādhisa hōdaḍe dāridrya ghanavāyittu. Marujēvaṇiya haṇṇa meddu, maraṇavāyitta kaṇḍe. Ellavanū sādhisa hōdaḍe ēnū illadantāyittu. Nānu nijava sādhisi badukidenu guhēśvarā.
Hindi Translation अमृत सेवनकर भूख ज्यादा हुआ था। परुष विद्या साधन करने चलेतो दारिद्र्य ज्यादा हुआ था। मरुजवणि फल खाकर मृत्यु पाये देखा। सब को साधने चले तो कुछ भी नहीं मिला। मैं सत्य को साधकर बचा गुहेश्वरा। Translated by: Eswara Sharma M and Govindarao B N
Tamil Translation அமுதத்தைச் சுவைத்து பசி மிகுந்தது. பரிசனவேதியால் பயனுறின் வறுமை மிகுந்தது சஞ்ஜீவினியின் பழத்தை மென்று மடிந்ததைக் கண்டேன் சாதனைகளை சாதிக்க விழைந்தால் எதுவுமின்றிப் போனது நான் உண்மையைச் சாதித்து பிழைத்துள்ளேன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಪ್ಯಾಯನ ಘನವಾಯಿತ್ತು = ಹಸಿವು, ಅತೃಪ್ತಿ ಅತಿಯಾಗಿ ಬೆಳೆಯಿತು; ಅಮೃತ = ಶಾಶ್ವತವಾಗಿ ಹಸಿವ ಹಿಂಗಿಸಿ ತೃಪ್ತಿಯನೀಯುವ ರಸಾಯನ; ಎಲ್ಲವನೂ = ಲೋಕದಲ್ಲಿ ಪ್ರಚಲಿತವಿರುವ, ತಾಂತ್ರಿಕ ಶಾಸ್ತ್ರಗಳಲ್ಲಿ ನಮೂದಿಸಲಾದ-ವಿವಿಧ ಸಾಧನೆಗಳನ್ನು; ಏನೂ ಇಲ್ಲದಂತಾಯಿತ್ತು = ಬದುಕನ್ನು ಸಾರ್ಥಕಗೊಳಿಸುವ ಯಾವುದೂ ಸಿದ್ಧಿಸಲಿಲ್ಲ.; ಕಂಡೆ = ಕಂಡೆನು; ಘನವಾಯಿತ್ತು = ಅತಿಯಾಗಿ ಬೆಳೆಯಿತು.; ದಾರಿದ್ರ್ಯ = ಮನದ ದಾರಿದ್ರವು, ಇನ್ನಷ್ಟು ಸಂಪತ್ತು ಬೇಕು ಎಂಬ ಭಾವವು; ನಾನು = ಶರಣನು.; ನಿಜವ ಸಾಧಿಸಿ = ನಿಜಸ್ವರೂಪವನು ಅರಿತು; ಪರುಷವೇದಿ = ಲೋಹವನು ಸುವರ್ಣಗೊಳಿಸುವ ಪರುಷವಿದ್ಯೆ.; ಬದುಕಿದೆನು = ಭವಮುಕ್ತನಾದೆನು; ಮರಣವಾಯಿತ್ತ = ಹಾಗೆ ಸವಿದವರು ಮರಣಹೊಂದಿದುದನು; ಮರುಜವಣಿ = ಮರುಜೀವ ಕೊಡುವದೆಂದು ನಂಬಲಾದ ಒಂದು ಸಸ್ಯ.; ಮೆದ್ದು = ಸವಿದರೂ ಕೂಡ; ಸಾಧಿಸಹೊದಡೆ = ಬಹುಪ್ರಯಾಸದಿಂದ ಸಾಧಿಸಿದರೆಯೂ; ಸಾಧಿಸಹೋದಡೆ = ಅದನ್ನು ಸಾಧನೆಯ ಮೂಲಕ ಪಡೆಯಹೋದರೆಯೂ; ಸೇವನೆಯ ಮಾಡಿ = ಅದನ್ನು ಸೇವಿಸಿಯೂ; ಹಣ್ಣ = ಅದರ ಫಲವನ್ನು; Written by: Sri Siddeswara Swamiji, Vijayapura