Index   ವಚನ - 10    Search  
 
ಲಿಂಗಪ್ರಸಾದವ ಕೊಂಬುತಿದ್ದು ಮತ್ತೆ, ಪದಾರ್ಥದ್ರವ್ಯಂಗಳು ಇದಿರೆಡೆಯಾಗಿ ಬರಲಿಕಾಗಿ ಆ ಕರದಲ್ಲಿಯೆ ದ್ರವ್ಯವ ಸಮರ್ಪಿಸಬಹುದೆ? ಅಹುದೆಂದಡೆ ಕ್ರೀ ಸೂತಕ, ಅಲ್ಲಾ ಎಂದಡೆ ಪ್ರಥಮಪ್ರಸಾದ ಅವರಿಗಿಲ್ಲ. ಇಂತೀ ಉಭಯವನರಿದು ಅರ್ಪಿಸಬಲ್ಲಡೆ ಲಿಂಗಾಂಗ ಸಹಭೋಜನವೆಂಬೆ. ಅಲ್ಲದಿರ್ದಡೆ ಪಡುವಿಂಗೆ ನೆರೆದ ತುಡುಗುಣಿಗಳಂತೆ ಬಾಯೊಳಗಣ ಕಚ್ಚು ದೇಹದೊಳಗಣ ಮುರುಗು ಅವಂಗಾವ ನಿತ್ಯನೇಮವೂ ಇಲ್ಲ, ಇದು ಸತ್ಯ, ಭೋಗಬಂಕೇಶ್ವರಲಿಂಗ ಸಾಕ್ಷಿಯಾಗಿ.