ವೇದವೆಂಬುದು ಓದಿನ ಮಾತು;
ಶಾಸ್ತ್ರವೆಂಬುದು ಸಂತೆಯ ಸುದ್ದಿ.
ಪುರಾಣವೆಂಬುದು ಪುಂಡರ ಗೋಷ್ಠಿ,
ಆಗಮವೆಂಬುದು ಅನ್ನತದ ನುಡಿ,
ತರ್ಕವೆಂಬುದು ತಗರ ಹೋರಟೆ.
ಭಕ್ತಿ ಎಂಬುದು ತೋರಿ ಉಂಬ ಲಾಭ.
ಗುಹೇಶ್ವರನೆಂಬುದು ಮೀರಿದ ಘನವು!
Transliteration Vēdavembudu ōdina mātu;
śāstravembudu santeya suddi.
Purāṇavembudu puṇḍara gōṣṭhi,
āgamavembudu annatada nuḍi,
tarkavembudu tagara hōraṭe.
Bhakti embudu tōri umba lābha.
Guhēśvaranembudu mīrida ghanavu!
Hindi Translation वेद पढने की बात।
शास्त्र बाजार की बात।
पुराण बखेडियों की गोष्ठी।
तर्क भेडों का झगडा।
भक्ति दिखाकर खाने का लाभ।
गुहेश्वरा इन सबसे परे घन है!
Translated by: Eswara Sharma M and Govindarao B N
Tamil Translation வேதம் என்பது வெற்றொலித்திரளாம்
சாத்திரமென்பது ஆதாரமற்ற சொற்களாம்
புராணமென்பது திறமைமிக்கோரின் சாகசக் கதைகளாம்
தர்க்கமென்பது வெற்று விவாத சொற்போராம்
பக்தி என்பது பகட்டுப்படையலாம்
குஹேசுவரனென்பது மீறிய மெய்ப்பொருளாம்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಓದಿನ ಮಾತು = ವೈಯಕ್ತಿಕವಾಗಿಯೂ ಸಾಮೂಹಿಕವಾಗಿಯೂ ವಿಶಿಷ್ಟರೀತಿಯಲ್ಲಿ ಪಠಿಸಲಿಕ್ಕಿರುವ ಶಬ್ದರಾಶಿ; ತಗರ ಹೋರಟೆ = ಟಗರ ಕಾಳಗ, ಖಂಡನ ಮಂಡನಾತ್ಮಕವಾದ ಬೌದ್ದಿಕ ಹೋರಾಟ; ತರ್ಕ = ಊಹಾಶಾಸ್ತ್ರ; ತೋರಿ ಉಂಬ ಲಾಭ = ಪದಾರ್ಥಗಳನ್ನು ನಿವೇದಿಸಿ ಊಟಮಾಡುವ ಉದರಪೋಷಣಾ ದೃಷ್ಟಿ; ಪುಂಡರ ಗೋಷ್ಠಿ = ಬಲವಂತರ ಸಾಹಸ ಮತ್ತು ಸಂಘರ್ಷದ ಕಥೆಗಳು; ಪುರಾಣ = ಸ್ಕಾಂದ ಮುಂತಾದ ಪುರಾಣಗಳು; ಭಕ್ತಿ = ತೋರಿಕೆಯ ಭಕ್ತಿಯು; ಮೀರಿದ ಘನ = ಮೇಲೆ ಹೇಳಿದ ಐದು ಸಂಗತಿಗಳನು ಮೀರಿದ ಪರಿಪೂರ್ಣವಸ್ತು; ವೇದ = ಋಗಾದಿ ವೇದಗಳು; ಶಾಸ್ತ್ರ = ಯಜ್ಞಾದಿ ಕರ್ಮಗಳ ಮೂಲಕ ಲೋಕಾದಿಲೋಕಂಗಳ ಗತಿ ನಿರ್ದೇಶಿಸುವ ಆದೇಶಾತ್ಮಕ ಗ್ರಂಥಗಳು; ಸಂತೆಯ ಸುದ್ದಿ = ನಿರಾಧಾರವಾದ ಮಾತುಗಳು;
Written by: Sri Siddeswara Swamiji, Vijayapura