•  
  •  
  •  
  •  
Index   ವಚನ - 466    Search  
 
ಆಸೆಯೆಂಬ ಶೂಲದ ಮೇಲೆ, ವೇಷವೆಂಬ ಹೆಣನ ಕುಳ್ಳಿರಿಸಿ; ಧರೆಯ ಮೇಲುಳ್ಳ ಹಿರಿಯರು ಹೀಂಗೆ ಸವೆದರು ನೋಡಾ! ಆಸೆಯ ಮುಂದಿಟ್ಟುಕೊಂಡು ಸುಳಿವ ಹಿರಿಯರ ಕಂಡು, ಹೇಸಿಕೆಯಾಗಿತ್ತು ಕಾಣಾ ಗುಹೇಶ್ವರಾ ಲಿಂಗಕ್ಕೆ ಸಂಗನಬಸವಣ್ಣಾ.
ಕಠಿಣ ಶಬ್ದಾರ್ಥ ಆಸೆ = ಲೌಕಿಕ ಅಶೋತ್ತರ; ಮುಂದಿಟ್ಟುಕೊಂಡು = ಆಸೆಗಳ ಪೂರೈಸುವುದೇ ಬದುಕಿನ ಧ್ಯೇಯವನ್ನಾಗಿರಿಸಿಕೊಂಡು; ವೇಷವೆಂಬ ಹೆಣ = ತೋರಿಕೆ ಮಾತ್ರವಾದ ಜಡಪ್ರಪಂಚ, ಅನಿತ್ಯವಾದ ಸಂಸಾರ, ವೈಷಯಿಕ ಭೋಗಭಾಗ್ಯಂಗಳು; ಸವೆ = ಆಯುಷ್ಯವನ್ನೆಲ್ಲ ಕಳೆದುಕೊಳ್ಳು, ಸೋತುಹೋಗು, ಏನನ್ನೂ ಪಡೆಯದೆ ಕೊನೆಯಲ್ಲಿ ನಿರಾಶನಾಗು.; ಸುಳಿವ = ಬದುಕುವ; ಹಿರಿಯರು = ಬಲ್ಲ-ಬಲ್ಲಿದರೆಂಬುವರವರು; ಹೇಸಿಕೆಯಾಗು = ಜುಗುಪ್ಸೆ ತಾಳು; Written by: Sri Siddeswara Swamiji, Vijayapura
Transliteration (Vachana in Roman Script) Āseyemba śūlada mēle, vēṣavemba heṇana kuḷḷirisi; dhareya mēluḷḷa hiriyaru hīṅge savedaru nōḍā! Āseya mundiṭṭukoṇḍu suḷiva hiriyara kaṇḍu, hēsikeyāgittu kāṇā guhēśvarā liṅgakke saṅganabasavaṇṇā. Read More
Hindi Translation आशा नामक शूल पर वेष जैसी लाश बिठाकर धरती पर बुजुर्ग कैसे निराश हुए देखो! आशा आगे रखकर जीते बुजुर्ग को देखकर असह्य हुआ गुहेश्वरा लिंग को संगनबसवण्ण। Translated by: Eswara Sharma M and Govindarao B N
Tamil Translation ஆசையென்னும் சூலத்தின் மீது, வேடமெனும் பிணத்தை அமர்த்தி பூமியின் மீதுள்ள பெரியோர் எங்ஙனம் தோற்றனர் காணாய்! ஆசையையே குறியெனக் கொண்டு வாழும் பெரியோரைக் கண்டு அருவருப்பு எய்தினேன் குஹேசுவரனே. Translated by: Smt. Kalyani Venkataraman, Chennai