•  
  •  
  •  
  •  
Index   ವಚನ - 468    Search  
 
ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು ಮನೆಮನೆ ತಪ್ಪದೆ ತಿರುಗುವ ತುಡುಗುಣಿಯಂತೆ ಕಾಡಲಾಗದು ಭಕ್ತನ, ಬೇಡಲಾಗದು ಭವಿಯ. ಕಾಡಿ ಬೇಡಿ ನೀವು ಒಲಿಸಿಕೊಂಡಡೆ, ಬೇಂಟೆಯ ಶ್ವಾನ ಮೊಲಕ್ಕೆ ಬಾಯಿದೆರೆದಂತೆ ಗುಹೇಶ್ವರಾ.
(ಕಠಿಣ ಶಬ್ದಾರ್ಥ) ಕೈಯಲ್ಲಿ ಹಿಡಿದುಕೊಳ್ = ಆ ಪರಮಾತ್ಮನ ಕುರುಹನ್ನು ಕೈಯಲ್ಲಿ ಇರಿಸಿಕೊಳ್ಳು, ದೇಹದಲ್ಲಿ ಧರಿಸಿಕೊಳ್ಳು; ಜಗದ ಕರ್ತ = ಜಗತ್ತನ್ನು ಸೃಷ್ಟಿಸಿದವ, ಪರಮಾತ್ಮ; ತುಡುಗುಣಿ = ಕದ್ದು ತಿನ್ನುವ ದನ, ನಾಯಿ, ಸ್ವೈರ ದನ; ಬಾಯಿದೆರೆ = ಆಸೆಪಡು, ಬಾಯಿಬಿಡು; ಭವಿ = ಭಕ್ತಿಯಿಲ್ಲದವ, ನಾಸ್ತಿಕ; Written by: Sri Siddeswara Swamiji, Vijayapura
Transliteration (Vachana in Roman Script) Jagada kartana kaiyalli hiḍidukoṇḍu manemane tappade tiruguva tuḍuguṇiyante kāḍalāgadu bhaktana, bēḍalāgadu bhaviya. Kāḍi bēḍi nīvu olisikoṇḍaḍe, bēṇṭeya śvāna molakke bāyideredante guhēśvarā. Read More
Hindi Translation जगतकर्ता को हाथ में पकडकर घर घर घूमते चुरी गाय जैसे भक्त को सताना मत, भवि से मत माँगना। सताते माँगकर शरीर पोषण करे तो शिकारी कुत्ता खरगोश की आशा करने जैसे गुहेश्वरा! Translated by: Eswara Sharma M and Govindarao B N
Tamil Translation உலகைப் படைத்தவனைக் கையிலிருத்திக் கொண்டு வீடு வீடாகத் திரியும் திருட்டுப் பசுவைப்போல பக்தனைக் காணலாகாது, பக்தியற்றோனிடம் வேண்டலாகாது துன்புறுத்தி, வேண்டி, உடலைப் பேணின், வேட்டை நாய் முயலை விரும்பியதனையது குஹேசுவரனே. Translated by: Smt. Kalyani Venkataraman, Chennai