Index   ವಚನ - 13    Search  
 
ಕಾಲವೇಳೆಯನರಿದು ತೃಣ ವಾರಿ ನೆಳಲನರಿದು ರಕ್ಷಿಸಿ ಕಾವನಿರವು. ಪಿಂಡ ಪ್ರಾಣ ಆರೋಗ್ಯಂಗಳಲ್ಲಿ ನಿಂದು ಆತ್ಮನ ನಿಜಸ್ವಸ್ಥವನರಿದು ಕ್ರೀಯಲ್ಲಿ ಶುದ್ಧ ಪೂಜೆಯಲ್ಲಿ ನಿಷ್ಠೆ ನೆಲೆಯನರಿದಲ್ಲಿ ತ್ರಿವಿಧದ ಬಿಡುಗಡೆ. ಆತ್ಮನ ಬಿಡುವ ಅವಸಾನವನರಿಯಬೇಕು ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ.