ಸತಿ ಸುತ ಮಾತಾಪಿತರಿಗೆಂದು ಪಡೆದಡೆ
ನಿಮ್ಮಾಣೆ ಕಂಡಯ್ಯಾ.
ಮಾನವರ ಸೇವೆಯ ಮಾಡಿದಡೆ
ನಿಮ್ಮಾಣೆ ಕಂಡಯ್ಯಾ.
ನೀವಲ್ಲದನ್ಯಕ್ಕೆರಗಿದಡೆ ನಿಮ್ಮಾಣೆ ಕಂಡಯ್ಯಾ.
ಎನ್ನ ಸತಿಯಲ್ಲದನ್ಯ ಸತಿಗಳುಪಿದಡೆ
ನಿಮ್ಮಾಣೆ ಕಂಡಯ್ಯಾ.
ತನು ಮನ ಧನ ವಂಚನೆಯಾದಡೆ
ನಾಚಯ್ಯಪ್ರಿಯ ಮಲ್ಲಿನಾಥಯ್ಯಾ,
ನಿಮ್ಮಾಣೆ ಕಂಡಯ್ಯಾ.
Art
Manuscript
Music
Courtesy:
Transliteration
Sati suta mātāpitarigendu paḍedaḍe
nim'māṇe kaṇḍayyā.
Mānavara sēveya māḍidaḍe
nim'māṇe kaṇḍayyā.
Nīvalladan'yakkeragidaḍe nim'māṇe kaṇḍayyā.
Enna satiyalladan'ya satigaḷupidaḍe
nim'māṇe kaṇḍayyā.
Tanu mana dhana van̄caneyādaḍe
nācayyapriya mallināthayyā,
nim'māṇe kaṇḍayyā.