Index   ವಚನ - 2    Search  
 
ಎಲ್ಲವನರಿದಲ್ಲಿ, ಕಡೆಯಲ್ಲಿ ಕೊಲ್ಲಬೇಕೆಂಬುದೊಂದು ವೇದ ಉಂಟೆ? ಶಾಸ್ತ್ರವನೆಲ್ಲವ ಕಲಿತಲ್ಲಿ ಗೆಲ್ಲ ಸೋಲಕ್ಕೆ ಹೊರಬೇಕೆಂದು ಕಡೆಯಲ್ಲಿ ಒಂದು ಸೊಲ್ಲುಂಟೆ? ಪುರಾಣವನೆಲ್ಲವನೋದಿದಲ್ಲಿ ಸರ್ವಜೀವವ ಕೊಲ್ಲು ಕೊರೆ ಎಂಬುದೊಂದು ದಳ್ಳುರಿಯುಂಟೆ? ಶ್ರುತಿಯ ಕೇಳುವಲ್ಲಿ ಸ್ಮೃತಿಯನಂಗೀಕರಿಸುವಲ್ಲಿ ಸರ್ವಹತವ ಮಾಡಬೇಕೆಂಬುದೊಂದು ಗತಿಯುಂಟೆ? ಇಂತೀ ಆತ್ಮನಲ್ಲಿ ಸರ್ವಭೂತ ಹಿತವುಳ್ಳಂಗೆ ಆತ ಅತೀತ ಸ್ವಯವಸ್ತು ದಸರೇಶ್ವರಲಿಂಗವು.