ಕಂಡ ಮತ್ತೆ ಕಂಡುದ ಕಾಣುವುದಕ್ಕೆ
ಮುನ್ನವೇ ಕಾಣದುದ
ಉಭಯ ದೃಷ್ಟವ ಕಡೆಗಾಣಿಸಿ
ಕಂಡುದ ಕಾಣದಲ್ಲಿ ಎಯ್ದಿಸಿ
ಕಾಣದುದ ಕಂಡಲ್ಲಿ ನಿಕ್ಷೇಪಿಸಿ
ಅದು ಉರಿ ಕರ್ಪುರದ ಇರವಿನಂತೆ
ಆದುದು ಇಷ್ಟಲಿಂಗ ಆತ್ಮದೃಷ್ಟಕೂಟ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.
Art
Manuscript
Music
Courtesy:
Transliteration
Kaṇḍa matte kaṇḍuda kāṇuvudakke
munnavē kāṇaduda
ubhaya dr̥ṣṭava kaḍegāṇisi
kaṇḍuda kāṇadalli eydisi
kāṇaduda kaṇḍalli nikṣēpisi
adu uri karpurada iravinante
ādudu iṣṭaliṅga ātmadr̥ṣṭakūṭa.
Śambhuvininditta svayambhuvinindatta atibaḷa nōḍā,
mātuḷaṅga madhukēśvaranu.