Index   ವಚನ - 37    Search  
 
ಜಗಭಗದ ಊರ್ಧ್ವದಲ್ಲಿ ಮೋಹನದ ಗೊಟ್ಟಿ ಹುಟ್ಟಿತ್ತು. ಗೊಟ್ಟಿಯ ಪೂರ್ವದಲ್ಲಿ ಕಮಲವರಳಿತ್ತು. ಕಮಲ ಹೃತ್ಕಮಲದಲ್ಲಿ ಬಿಂದು ವ್ಯಂಜನದಿಂದ ಗುರುಲಿಂಗ ರೂಪಾಗಿ ಪುಲ್ಲಿಂಗ ಚರಿಸಿತ್ತು. ನಪುಂಸಕಲಿಂಗವಡಗಿತ್ತು. ಬಿಂದುವಿನಿಂದ ನಾದ, ಆ ಸುನಾದದಿಂದ ಕಳೆ, ಆ ಕಳೆಯ ಕಾಂತಿಯಿಂದ ಜಗ. ಇಂತೀ ಜಗದ ಉತ್ಪತ್ಯದಲ್ಲಿ ಹುಟ್ಟದೆ ಸ್ಥಿತಿಗೊಳಗಲ್ಲದೆ ಲಯಕ್ಕೆ ಹೊರಗಾಗಿ ಅರಿದುದು ಸ್ವಾನುಭಾವ ಸಂಬಂಧ ಇದು ಪಿಂಡ, ಪಿಂಡಜ್ಞಾನ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.