ತನಗೆ ಉಂಟಾಗಿ ಶಿಷ್ಯನ ಮನೆಗೆ ಹೋಗಿ
ಕಟ್ಟಳೆಯ ವರುಷಕ್ಕೆ ತಪ್ಪದೆ
ಅಂಗವಸ್ತ್ರವೆಂದು ಲಿಂಗವಸ್ತ್ರವೆಂದು ಕನಕ ಪರಿಮಳವೆಂದು
ಅಂದಣ ಛತ್ರ ಚಾಮರ ಕರಿ ತುರಗಂಗಳೆಂದು
ಇವು ಬಂದುದಿಲ್ಲ ಎಂದು ಸಂದಣಿ
ಲಂದಣಗಾರರ ಕೈಯಲ್ಲಿ ಹೇಳಿಸಿ
ಅವು ಬಾರದಿರೆ ತಾ ಸಂಧಿಸಿ
ಸೂಚಿಸುವ ಲಿಂಗ ಲಿಂಗಮಾರಿಗೆ
ಗುರುಸ್ಥಲ ಎಂದಿಗೂ ಇಲ್ಲ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.