Index   ವಚನ - 40    Search  
 
ತನು ಮೂರು ಆತ್ಮವಾರು ಜೀವವೆರಡು ಜ್ಞಾನ ಎಂಬತ್ತನಾಲ್ಕು ಲಕ್ಷ ಪರಮನೊಂದೆ ಭೇದ. ಇಂತೀ ತ್ರಿವಿಧ ತನು ವರ್ಣಂಗಳಲ್ಲಿ ವಿಶ್ವಮಯವಾಗಿ ಸರ್ವ ಜೀವಂಗಳೆಲ್ಲವೂ ತಮ್ಮ ನೆಲ ಹೊಲದಲ್ಲಿ ಆಹಾರ ವ್ಯವಹಾರ ವಿಷಯಂಗಳಿಂದ ಉತ್ಪತ್ಯ ಸ್ಥಿತಿ ಲಯಂಗಳಿಂದ ಕಲ್ಪಾಂತರಕ್ಕೊಳಗಾಗಿಪ್ಪುದು ಬ್ರಹ್ಮಾಂಡಪಿಂಡ. ಇಂತಿವ ಕಳೆದುಳಿದು ಜ್ಞಾನಪಿಂಡ ಉದಯವಾದಲ್ಲಿ ಸರ್ವ ಘಟಪಟಾದಿಗಳ ಸೋಂಕು ಸರ್ವ ಚೇತನದ ವರ್ಮ ಸರ್ವ ಜೀವದ ಕ್ಷುದೆ, ಸರ್ವಾಂತ್ಮಂಗಳಲ್ಲಿ ದಯ ಕ್ರೂರಮೃಗ ಅಹಿ ಚೋರ ಹಗೆ ಇಂತಿವು ಮುನಿದಲ್ಲಿ ಸಂತತ ಭೀತಿಯಿಲ್ಲದೆ ಸಂತೈಸಿಕೊಂಡು ಸರ್ವಾತ್ಮಕ್ಕೆ ಸಂತೋಷವ ಮಾಡುವುದೆ ಜ್ಞಾನ ಪಿಂಡೋದಯ. ಶಂಭುವಿನಿಂದಿತ್ತು ಸ್ವಯಂಭುವನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು