ವಿಷ ಚರದಲ್ಲಿ ಉಂಟು, ವಿಷ ಸ್ಥಾವರದಲ್ಲಿ ಉಂಟು.
ನಿರ್ವಿಷ ಚರದಲ್ಲಿ ಉಂಟು, ನಿರ್ವಿಷ ಸ್ಥಾವರದಲ್ಲಿ ಉಂಟು.
ಇದಿರಿಟ್ಟು ಕಾಬಲ್ಲಿ ಉಂಟು ದೃಷ್ಟ.
ಅಲ್ಲಿ ಇಲ್ಲದಿರೆ ತನ್ನಲ್ಲಿ ಉಂಟು ದೃಷ್ಟ.
ಆ ಗುಣ ನೀರಿನೊಳಗೆ ಬೆರೆದೆಯ್ದುವ ತಿಳಿವಳಿಯ
ಕುಂಪಟೆಯಂತೆ.
ವಾರಿಯಂಗವೆ ತನ್ನ ಚರಾಂಗವಾಗಿ
ಇದು ಸದ್ಭಾವಕ್ರಿಯಾಂಗಸ್ಥಲ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.