Index   ವಚನ - 86    Search  
 
ವಿಷ ತನ್ನೊಳಗಾದಡೂ ತನ್ನ ಕೇಡು, ವಿಷದೊಳಗು ತಾನಾದಡೂ ತನ್ನ ಕೇಡು. ಕರ್ಕಸದ ನಡುವೆ ಹುಟ್ಟಿದ ಕಂಬದಂತೆ. ಇಂತಿವನರಿದು ಮಾಡಿ ನೀಡಿ ವೃಥಾ ನಿರರ್ಥಕ್ಕೆ ಹೋಗಬೇಡ. ಹುತ್ತಕ್ಕೆ ಹಾಲನೆರೆದಲ್ಲಿ ಸರ್ಪ ಕುಡಿಯಿತ್ತೆ ಆ ಹಾಲ? ಅದು ತಮ್ಮ ಕೃತ್ಯದ ಕಟ್ಟಣೆಗೆ ಸರ್ಪನೊಪ್ಪಿ ಕಾಟವ ಬಿಟ್ಟಿತೆ? ಅದು ತಮ್ಮ ಚಿತ್ತದ ದರ್ಪದ ತೆರ. ಇಂತೀ ವಿಶ್ವಾಸದಿಂದ ಶಿವಭಕ್ತಿಯನೊಪ್ಪುಗೊಂಬ, ಇದು ವಿಶ್ವಾಸಿಯ ಸ್ಥಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.