Index   ವಚನ - 88    Search  
 
ಶಿಲೆಯೊಳಗೆ ಪಾವಕನಿಪ್ಪ ತೆರನಂತೆ ಕಡೆ ನಡು ಮೊದಲೆನ್ನದೆ ಎಲ್ಲಿ ಮುಟ್ಟಿದಲ್ಲಿ ಕಿಡಿ ಪಲ್ಲೈಸುವಂತೆ ಸರ್ವಾಂಗಲಿಂಗವಾದ ಶರಣಂಗೆ ಆವ ಗುಣದಲ್ಲಿ ನೋಡಿದಡೂ, ಅಲ್ಲಿಯೆ ಲಿಂಗ ಮುಂಚು. ತನಗೆ ಅನ್ಯ ಭಿನ್ನವೆಂಬ ಮುಟ್ಟಿನ ಸೂತಕ ಕಟ್ಟಿನ ಭಾವವಿಲ್ಲ. ಹಣ್ಣಿನಲ್ಲಿ ವಿಷ ವೇಧಿಸಲಿಕ್ಕಾಗಿ ಹಣ್ಣು ಸಾವುದೆ ಹಣ್ಣಿನ ರಸವ ಕೊಂಡವನಲ್ಲದೆ? ಈ ಗುಣ ಸರ್ವಾಂಗಲಿಂಗಿಯ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.