Index   ವಚನ - 89    Search  
 
ಶ್ರೀಗುರು ಕುರುಹು ಕೊಟ್ಟು, ಕುರುಹಿನ ಬೆಂಬಳಿಯಲ್ಲಿ ಅರಿಯೆಂದು ಹೇಳಲಿಕ್ಕಾಗಿ ಆ ಉಭಯವ ಮರೆದು ಬೇರೊಂದರಿವಿನ ಮುಖದಲ್ಲಿ ಒಡಗೂಡಿಹೆನೆಂಬ ಅಡಗಗಳ್ಳರ ನೋಡಾ. ಕುರಿ ನಾಯಿ ವತ್ಸ ಮೊದಲಾಗಿಯೂ ತಮ್ಮ ಒಡೆಯನ ಇಂತೀ ಗುಣವನರಿಯದ ಬಡಿವ ಬಾಯವರನೊಡಗೂಡ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.