Index   ವಚನ - 29    Search  
 
ಜಂಗಮ ನಮಸ್ಕಾರವೆ ಗುರುಪೂಜೆ, ಜಂಗಮ ಪೂಜೆಯೆ ಲಿಂಗಪೂಜೆ, ಜಂಗಮ ತೃಪ್ತಿಯೆ ತನಗೆ ಪ್ರಸನ್ನ. ತನಗೆ ಪ್ರಸನ್ನವಾದುದೆ ನಿತ್ಯಪ್ರಸಾದದಾಗು, ಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ಕಟ್ಟುಗೊತ್ತು ಕಾಣಾ! ಸಂಗನಬಸವಣ್ಣ ಪ್ರಭುವೆ.