ಖೇಚರರಾಗಲಿ ಭೂಚರರಾಗಲಿ
ಲಾಂಛನಧಾರಿಯಾಗಲಿ,
ಮರಣವಾರಿಗೂ ಮನ್ನಣೆಯಿಲ್ಲ!
ಸನಕ ಸನಂದಾದಿಗಳಿಗೂ ಮರಣ ಮನ್ನಣೆಯಿಲ್ಲ.
ಇದು ಕಾರಣ, ಗುಹೇಶ್ವರಾ ನಿಮ್ಮ ಶರಣರು
ಕಾಲನ ಬಾರಿಗೆ ಕಲ್ಪಿತರಾಗರು!
Transliteration Khēcararāgali bhūcararāgali
lān̄chanadhāriyāgali,
maraṇavārigū mannaṇeyilla!
Sanaka sanandādigaḷigū maraṇa mannaṇeyilla.
Idu kāraṇa, guhēśvarā nim'ma śaraṇaru
kālana bārige kalpitarāgaru!
Hindi Translation खेचर हो, भूचर हो, लांछनधारी हो,
मृत्यु से कोई बचा नहीं !
सनक सनंदादियों को मरण,गौरव नहीं!
इस कारण गुहेश्वर
तुम्हारे शरण कालाधीन नहीं होते।
Translated by: Eswara Sharma M and Govindarao B N
Tamil Translation ஆகாயத்தில் சஞ்சரிப்போருக்கும், பூமியில் உள்ளவருக்கும்
திருச்சின்னமணிந்தோருக்கும் மரணம் அருளாது
சனகர் போன்றோருக்கும் மரணம் அருளாது
எனவே குஹேசுவரனே
உம் சரணர் காலத்தின் வசமாவதில்லை.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಾಲನ ಬಾರಿಗೆ ಕಲ್ಪಿತ = ಕಾಲಪುರುಷನ ಅಧೀನಕ್ಕೆ ಒಳಗಾಗು; ಖೇಚರ = ಆಕಾಶಗಾಮಿ; ಭೂಚರ = ಭೂಮಿಯ ಮೇಲೆ ನಡೆಯುವವನು; ಲಾಂಛನಧಾರಿ = ಧಾರ್ಮಿಕ ಮನುಷ್ಯ; ಸನಕ ಸನಂದಾದಿಗಳು = ಮುನಿಶ್ರೇಷ್ಠರು, ಮಹಾತಪಸ್ವಿಗಳು, ಅಖಂಡ ಬ್ರಹ್ಮಚಾರಿಗಳು;
Written by: Sri Siddeswara Swamiji, Vijayapura