Index   ವಚನ - 4    Search  
 
ಭಕ್ತಿಜ್ಞಾನ ವೈರಾಗ್ಯದಿಂದ ಅರಿಯಬೇಕೆಂಬುದು ಭಕ್ತಿಯೊ ಜ್ಞಾನವೊ ವೈರಾಗ್ಯವೊ? ಮೂರಕ್ಕೆ ಬೇರೊಂದೆಡೆಯುಂಟೆ? ಅದರ ಎಡೆ ಗುಡಿಯ ತೋರು, ಬರಿಯ ಮಾತಿನ ಮಾಲೆ ಬೇಡ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.