Index   ವಚನ - 5    Search  
 
ಸ್ಥಳಕುಳವನೆತ್ತಿದಲ್ಲಿ ಸಮಯಕ್ಕೆ ದೂರ. ಚಿದ್ಘನ ಭೇದಭೇದಾಂತವನೆತ್ತಿದಲ್ಲಿ ಅಧ್ಯಾತ್ಮಕ್ಕೆ ದೂರ. ಸರ್ವವು ಸಮವೆಂದಡೆ ವಿಧಿ ನಿಷೇಧ ಕಾಲ ಕರ್ಮಕ್ಕೊಳಗಹರುಂಟು. ಅದು ತನ್ನೊಪ್ಪದ ದರ್ಪಣದಂತೆ; ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.