Index   ವಚನ - 9    Search  
 
ಪೃಥ್ವಿ ಪೃಥ್ವಿಯ ಕೂಡಿದಲ್ಲಿ ಅಪ್ಪು ಅಪ್ಪುವ ಕೂಡಿದಲ್ಲಿ ತೇಜ ತೇಜವ ಕೂಡಿದಲ್ಲಿ ವಾಯು ವಾಯುವ ಕೂಡಿದಲ್ಲಿ ಆಕಾಶ ಆಕಾಶವ ಕೂಡಿ ನಿಂದಲ್ಲಿ ಜೀವನ ಪಾಪ ಪುಣ್ಯವಾವುದು ಹೇಳಿರಣ್ಣಾ. ಜೀವಕ್ಕೆ ಭವ ಕಾಯಕ್ಕೆ ಮರಣವೆಂಬರು. ಕಾಯ ಜೀವದ ಬೆಸುಗೆ ಅದಾವುದು ಹೇಳಿರಣ್ಣಾ. ಒಡೆಹಂಚ ಹೊಯಿದಡೆ ದನಿ ಭಿನ್ನವಾದಂತೆ ಅದಾರಿಂದ ಉಭಯ ಭಿನ್ನ ಹೇಳಿರಣ್ಣಾ. ಅದು ಕಂಚಿನ ಕಾಯದಿಂದಲೊ, ನಾದದ ಪ್ರಕೃತಿಯಿಂದಲೊ? ವಾಗದ್ವೈತದ ಸಂಬಂಧವಲ್ಲ, ಸ್ವಯದ ನಿಜ. ನಿನ್ನ ನೀನರಿ. ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.