Index   ವಚನ - 10    Search  
 
ಹೇಮ ಬಣ್ಣವ ಕೂಡಿದ ದೆಸೆಯಿಂದ ಮರ್ತ್ಯರುಗಳಿಗೆ ಆಗುಚೇಗೆಗಳಿಗೀಡಾಯಿತ್ತು. ದಿವ್ಯ ನಿರಂಜನ ನಿಜವಸ್ತು ಭವ್ಯರ ಭಕ್ತಿಗಾಗಿ ಶಕ್ತಿ ನಾಮರೂಪವಾಗಿ ತಲ್ಲೀಯವಾಗಲ್ಪಟ್ಟುದು, ಶಕ್ತಿ ಸಮೇತವಾಗಿ ಲಿಂಗವಾಯಿತ್ತು. ಅದು ರಂಜನೆಯ ಬಣ್ಣ, ಮಾಯದ ಗನ್ನ, ಅಂಬರದ ಚಾಪದ ಸಂಚದ ವಸ್ತು. ಮುನ್ನಿನಂತೆ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.