Index   ವಚನ - 12    Search  
 
ಶಾಸ್ತ್ರವೆ ಅಡ್ಡಣಿಗೆಯಾಗಿ, ಆಗಮವೆ ಹರಿವಾಣವಾಗಿ, ಪುರಾಣವೆ ಓಗರವಾಗಿ, ಉಂಬಾತ ವೇದವಾಗಿ, ಸಕಲ ರುಚಿಯನರಿದು ಭೋಗಿಸುವ ಪ್ರಣವ ತಾನಾಗಿ, ಅದರ ಭೇದ ಏತರಿಂದ ಅಳಿವು ಉಳಿವು? ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.