Index   ವಚನ - 13    Search  
 
ಆತ್ಮತತ್ತ್ವ ವಸ್ತುವಾದಡೆ ನಾನಾ ಘಟದಲ್ಲಿ ಇರಲೇಕೆ? ಆ ಘಟ ವಸ್ತುವ ಗರ್ಭೀಕರಿಸಿದಲ್ಲಿ ಪಂಚಭೌತಿಕಕ್ಕೆ ಒಡಲಾಗಲೇಕೆ? ಹಿಡಿಯಬಾರದು, ಹಿಡಿದು ಬಿಡಬಾರದು. ಒಡಲು ದಿಟವೆಂದಡೆ ಅದು ಒಡೆಯ ಹಾಕುವ ಕುಂಭ. ಒಡಲೊಡೆಯ ದಿಟವೆಂದಡೆ ರೂಪಿಲ್ಲದ ಛಾಯ. ಅರಿದು ಮುಕ್ತಿಯ ತೆರನಾವುದು? ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.