ಮರೆಯ ಮನೆಯ ಮಧ್ಯದಲ್ಲಿ
ಮನೋವಿಕಾರದ ಮಾನಿನಿ ಹುಟ್ಟಿದಳು.
ಹಗಲಿಗೆ ಹಾದರಗಿತ್ತಿ, ಇರುಳಿಗೆ ಸಜ್ಜನೆಯಾಗಿ
ಪುರುಷನ ಒಡಗೂಡಿಪ್ಪಳು.
ಅವಳಂಗದ ಬಸುರ ಯೋನಿಯ ಕಂಗಳು, ಮನದ ಮೊಲೆ
ವಿಪರೀತದ ಮಂಡೆಯ ತುರುಬು ತುಡುಕಿತ್ತು ಮೂರಡಿಯಲ್ಲಿ.
ಅವಳ ಒಡಗೂಡುವನಾರೆಂದಲ್ಲಿ ನಿನ್ನ ನೀ ತಿಳಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
Art
Manuscript
Music
Courtesy:
Transliteration
Mareya maneya madhyadalli
manōvikārada mānini huṭṭidaḷu.
Hagalige hādaragitti, iruḷige sajjaneyāgi
puruṣana oḍagūḍippaḷu.
Avaḷaṅgada basura yōniya kaṅgaḷu, manada mole
viparītada maṇḍeya turubu tuḍukittu mūraḍiyalli.
Avaḷa oḍagūḍuvanārendalli ninna nī tiḷi,
puṇyāraṇyadahana bhīmēśvaraliṅga niraṅgasaṅga.
ಸ್ಥಲ -
ಆತ್ಮಘಟ ಸಂಗ ನಿರಿಯಾಣಯೋಗ ಭಾವಸ್ಥಲ