Index   ವಚನ - 39    Search  
 
ಸತ್ತ್ವ ರಜ ತಮವೆಂಬ ಮೂರು ಭಿತ್ತಿ ಕೂಡಿ ಘಟ್ಟಿಯಾದಲ್ಲಿ ಚಿತ್ತೆಂಬ ಪುತ್ಥಳಿ ಹುಟ್ಟಿತ್ತು. ಪುತ್ಥಳಿಯ ಪತ್ಥಳಿಯಲ್ಲಿ ಜಗ ಕರ್ತೃ ಹುಟ್ಟಿದ. ಕರ್ತೃವಂ ಹೆತ್ತವನ ನಾಭಿಯ ಮಧ್ಯದ ಬಾಲಲೀಲೆಯ ಸಾಲಿನೊಳಗಾದ ಸಂಪದವರಿವರಲ್ಲಾ ಕಾಲಕ್ಷಯನ ಕರ್ಮನಾಶನ ಭಾಳಾಂಬಕನ ಲೀಲೆಯಲ್ಲಿ ಆಡುತ್ತಿರೆಂದು ಸರ್ವಮಯಕ್ಕೆ ಹೊರಗಾದ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.