Index   ವಚನ - 40    Search  
 
ಇದಿರಿಟ್ಟು ಪೂಜಿಸುವಲ್ಲಿ ಷೋಡಶ ಉಪಚರಿಯದಲ್ಲಿ ಭರಿತನಾಗಿ ಇರಬೇಕು. ಅದು ಆರೋಪಿಸಿದಲ್ಲಿ ಭಾವ ಇದಿರಿಡದಲ್ಲಿ ಬೇರೊಂದು ಬಯಕೆಯ ಅರಿತಿರಬೇಕು. ಅರಿವನರಿತೆನೆಂದು ಕುರುಹ ಮರೆದಡೆ ಆ ಮರೆವುದೆ ತನ್ನ ತಿಂಬ ಮಾಯೆ ಎಂದರಿ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.