Index   ವಚನ - 48    Search  
 
ಆತ್ಮನಿದ್ದು ಶಯನಾಂತನಾಗಿ ಇದ್ದಲ್ಲಿ ಸಕಲ ಭೋಗಂಗಳನರಿಯಬಲ್ಲುದೆ? ರಾಜಸ ತಾಮಸದ ಮರೆಯಲ್ಲಿದ್ದು ಸಾತ್ತ್ವಿಕವರಿಯಬಲ್ಲುದೆ? ಏತರಲ್ಲಿದ್ದು ಚೇಟಿಯ ಕೊಡದಂತಿರಬೇಕು. ಇಷ್ಟ ನಿನ್ನ ನೀನರಿ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.