Index   ವಚನ - 52    Search  
 
ಕೊಲೆ ಹೊಲೆ ಪಾರದ್ವಾರವ ಪಾತಕ ಮಾಡುವರೊಳಗಿಟ್ಟುಕೊಂಡು ಘನಲಿಂಗದ ಮುದ್ರೆಯನಿಕ್ಕಿ ಹೊಲೆದೊಳೆದೆವೆಂದು ಕಲಹಕ್ಕೆ ಇದಿರಹ ಕುಲುಮೆಗಾರರಿಗೇಕೆ ಮೂರಕ್ಷರದ ಒಲವರ? ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.