Index   ವಚನ - 53    Search  
 
ಪೂರ್ವವ ಕಳೆದು ಪುನರ್ಜಾತನಾದೆವೆಂಬಿರಿ. ಪೂರ್ವ ಬಂದ ಬಟ್ಟೆಯ ಮರೆದು ಜಾತತ್ವಕ್ಕೆ ನಾನಾ ಭೌತಿಕವ ತೊಟ್ಟು ಪಿಷ್ಪದವರ ಅಭೀಷ್ಟನಾಗಿ ಮತ್ತೆ ಪುನರ್ಜಾತನಾದ ಪರಿಯಿನ್ನೆಂತೊ? ಜಂಗಮವಾದಲ್ಲಿ ಜನನಿ ಜನಕ ಸಹೋದರ ಮಿಕ್ಕಾದ ಭವಪಾಶಂಗಳ ಸ್ವಪ್ನದ ಸುಖದಂತೆ ಎಂದರಿದು, ತನ್ನಿರವ ತಾನರಿತು, ಮುಟ್ಟಿದ ಭಕ್ತರ ಮುಕ್ತಿಯ ಮಾಡು; ತ್ರಿಯಕ್ಷರದ ಗೊತ್ತು ಮುಟ್ಟರು, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.