Index   ವಚನ - 73    Search  
 
ದಾಳಿಹೋದ ಆಳಿನ ಉಸುರಿನಲ್ಲಿ ಒಂದು ವೇಣು ಹುಟ್ಟಿತು. ಮೂರು ಗೆಣ್ಣು, ಹದಿನಾರು ಹೋಟೆ. ಹತ್ತ ಕಳೆದು ಆರರ ಮೇಲೆ ನಿಂದುದು ಅಯಿದರ ನೆಲೆ. ಅಯಿದ ಕೂಡಿ ನಿಂದುದು ಇಪ್ಪತ್ತರ ಭಾವ. ತತ್ವಶಕ್ತಿಯಲ್ಲಿ ಅಡಗಿ ಆಳುವೆಣು ಹತ್ತು ಆರು ಇಪ್ಪತ್ತೈದು ಕೂಡಿ ನಿಶ್ಚಯವಾಯಿತ್ತು. ಇದರಂಗ ಭೇದಿಸಿ ತತ್ವವನರಿ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.