ಒಂದಿರುಹಿನ ಗೂಡಿನಲ್ಲಿ ಅಯಿದಾನೆ
ಮರಿಯನಿಕ್ಕಿ ಹೋದವು ತಮ್ಮ ಕಾಡಿಗೆ.
ಇರುಹು ಮರಿಯ ಕಣ್ಣ ಕಟ್ಟಿ
ಮರಿಯ ತೆಗೆದು ಹಾಕಿದವು ತಮ್ಮ ಗೃಹದಿಂದ.
ಆನೆ ಬಂದು ನಿಂದು ನೋಡಿ ಇದೇನಾಯಿತ್ತು ಮರಣ
ಎಂಬುದಕ್ಕೆ ಮೊದಲೇ ಆನೆ ಸತ್ತು ಇರುಹಿನ ಹಗೆ ಬಿಟ್ಟಿತ್ತು.
ಆ ಅರಿವ ಅರಿದು ನೋಡು,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.