Index   ವಚನ - 95    Search  
 
ಕೋಲ ಬಳಿಯ ಅಂಧಕನಂತೆ, ವಾಹನದ ಪಂಗುಳನಂತೆ, ಗಹನದಲ್ಲಿ ಸಿಕ್ಕಿದ ಶಿಶುವಿನಂತೆ, ಸ್ಥಾನದಪ್ಪಿ ಹೊಲಬುದಪ್ಪಿದ್ದೇನೆ, ಹೊಲದ ಹೊಲಬ ಹೇಳು, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.