•  
  •  
  •  
  •  
Index   ವಚನ - 525    Search  
 
ಊರಳೊಗೊಬ್ಬ ದೇವ, ಮಡುವಿನಲ್ಲೊಬ್ಬ ದೇವ, ಅಡವಿಯಲ್ಲೊಬ್ಬ ದೇವ, ಮಡಿಲಲೊಬ್ಬ ದೇವ, ನೀರು ನೀರ ಕೂಡಿ, ಬಯಲು ಬಯಲ ಕೂಡಿ ನರನೆಂಬ ದೇವ ತಾ ನಿರಾಳವೊ! ಲಿಂಗವೆಂಬುದೊಂದು ಅನಂತ[ದ] ಹೆಸರು, ಗುಹೇಶ್ವರನೆಂಬುದದೇನೊ?
Transliteration Ūraḷogobba dēva, maḍuvinallobba dēva, aḍaviyallobba dēva, maḍilalobba dēva, nīru nīra kūḍi, bayalu bayala kūḍi naranemba dēva tā nirāḷavo! Liṅgavembudondu ananta[da] hesaru, guhēśvaranembudadēno?
Hindi Translation गाँव में एक देव, जलावर्त में एक देव, जंगल में एक देव, गोद में एक देव। पानी पानी मिलकर, शून्य शून्य से मिलकर, नर जैसा देव खुद निराला है। लिंग कहना एक अनंत नाम गुहेश्वर कहना क्या ? Translated by: Eswara Sharma M and Govindarao B N
Tamil Translation ஊரினுள்ளே ஒரு கடவுள், மடுவிலே ஒரு கடவுள் காட்டிலொடு கடவுள், மடியில் ஒரு கடவுள் நீர்நீருடன் இணைந்து, வயல்வயலுடன் இணைந்து சாதகன் எனும் இறைவன் அவன் பேரமைதியுடையவன் இலிங்கம் என்பது எல்லையற்ற மெய்ப்பொருள் குஹேசுவரனென்னும் அது என்னவோ? Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಡವಿಯಲಿ = ನಿರ್ಜನವಾದ ನಿಸರ್ಗದ ತಾಣದಲ್ಲಿ; ಅನಂತ = ಅಪರಿಮಿತ ಸತ್ಯ; ಊರೊಳಗೆ = ಊರ ಮಧ್ಯದ ಗುಡಿಯ ಒಳಗೆ; ನರ = ಸಾಧಕ, ವಿಷಯಗಳಲ್ಲಿ ರಮಿಸದವ, ದೇವನಲ್ಲಿ ಅತುಲಪ್ರೇಮವುಳ್ಳವ; ನಿರಾಳ = ನಿರ್ಬಯಲು, ನಿಷ್ಕಲ; ಮಡಿಲಲಿ = ಸನಿಹದಲ್ಲಿ, ತನ್ನ ಉಡಿಯಲ್ಲಿ; ಮಡುವಿನಲಿ = ತೀರ್ಥಕ್ಷೇತ್ರದಲ್ಲಿ; ಲಿಂಗ = ಚಿದ್ಘನಲಿಂಗ; Written by: Sri Siddeswara Swamiji, Vijayapura