•  
  •  
  •  
  •  
Index   ವಚನ - 531    Search  
 
ಶರಣಸಂಬಂಧವನರಿದವನು ಎಂತಿರ್ದಡೇನಯ್ಯಾ? ತಿಳಿದು ನೋಡಿ ನಡೆಯದಿರ್ದಡೆ ಭಕ್ತಿವಿರೋಧ. ತೆರನನರಿದು ಮರವೆಯಳಿದು ಸುಳಿವನಾಗಿ ಉಪಜೀವಿಕನಲ್ಲ ಕೇಳಿರಣ್ಣಾ. ಗುಹೇಶ್ವರನ ಶರಣನ ಸಂಗಸುಖದ ಉರವಣೆಯ ಸೋಂಕು ಲೋಕಕ್ಕೆ ವಿರೋಧ!
Transliteration Śaraṇasambandhavanaridavanu entirdaḍēnayyā? Tiḷidu nōḍi naḍeyadirdaḍe bhaktivirōdha. Terananaridu maraveyaḷidu suḷivanāgi upajīvikanalla kēḷiraṇṇā. Guhēśvarana śaraṇana saṅgasukhada uravaṇeya sōṅku lōkakke virōdha!
Hindi Translation शरण संबंध ज्ञानी कैसे भी रहे तो क्या ? जानकर न चले तो भक्ति विरोध । रीति जानकर भूलकर भ्रमण करनेवाला उपजीविका नहीं है सुनो भाइयो ! गुहेश्वर शरण संग सुख संभ्रम स्पर्श लोक के विरोध है! Translated by: Eswara Sharma M and Govindarao B N
Tamil Translation தொடர்பை அறிந்த சரணன் எவ்விதம் இருந்தாலென்ன? அறிந்து உணர்ந்து ஒழுகவில்லைஎனின் அதுபக்திக்குக் கேடு நிலையையறிந்து, மறதியழிந்து, ஒழுகுவதால் பிறரைச்சார்ந்தவனல்லன். கேண்மின் குஹேசுவர சரணனின் பேரின்பமய செயல்முறைகள் மற்றோருக்கு வினோதமாம்! Translated by: Smt. Kalyani Venkataraman, Chennai
ಶಬ್ದಾರ್ಥಗಳು ಉಪಜೀವಿಕನಲ್ಲ = ಆತ ನಿಮ್ಮ ಭಕ್ತಿಪ್ರಸಾದವ ಸ್ವೀಕರಿಸುವವನಾಗಿ ಉಪಜೀವಿಕನೆಂದು ಭಾವಿಸಬೇಡಿ; ಉರವಣೆ = ಸಂಭ್ರಮ; ಎಂತಿರ್ದಡೆ ಏನು = ಎಂತಿದ್ದರೂ ಸರಿಯೆ; ತಿಳಿದು ನೋಡಿ = ಆ ಶರಣನ ಉನ್ನತವಾದ ನಿಲುವನು ಅರಿತು ನೋಡಿ; ತೆರನನರಿದು = ಶಿವಯೋಗದ ನೆಲೆ-ಕಲೆಗಳನ್ನು ತಿಳಿದು; ನಡೆಯದಿದ್ದಡೆ = ಭಕ್ತಿಭಾವದಿಂದ ವರ್ತಿಸದಿದ್ದರೆ; ಭಕ್ತಿವಿರೋಧ = (ಅದು) ಭಕ್ತಿಗೇ ಕೊರತೆ; ಮರವೆಯಳಿದು = ಮಾಯೆ ಮರವೆಗಳಿಂದ ಕಾಣಬಂದ ಜೀವಭಾವವನು ಉಳಿದು; ಶರಣಸಂಬಂಧವನರಿದವನು = ಚಿದ್ಘನಲಿಂಗಕ್ಕೂ ತನಗೂ ಇರುವ ಅವಿನಾಭಾವ ಸಂಬಂಧವನು ಅರಿತ ಶರಣ; ಸಂಗಸುಖ = ಲಿಂಗಾಂಗಸಮರಸ ಸುಖ; ಸುಳಿವನು = ಸಂಚರಿಸುತ್ತಾನೆ; ಸೋಂಕು = ಸ್ಪರ್ಶ; Written by: Sri Siddeswara Swamiji, Vijayapura