ನಿರಾಳಸ್ಥಾನದಲ್ಲಿ ಆಪ್ಯಾಯನವಿಲ್ಲದೆ
ಹೊಯಿತ್ತದೇನೆಂಬೆನಯ್ಯಾ?
ಹಲವು ನಾಮವಾದೆಯಲ್ಲಾ!
ಚಂದಚಂದದ ಚರಿತ್ರನಲ್ಲ ನಿಲ್ಲು ಮಾಣು.
ನಿಮ್ಮಿಚ್ಛೆಯ ಪಡೆದರೆಮ್ಮವರು.
ಇಂತಹ ದೇವನು ಅಂತಹ ದೇವನು ಎಂಬ ನಾಮ ಉರಿಸದು,
ಒಲ್ಲೆ ಕಾಣಾ ಗುಹೇಶ್ವರಾ.
Transliteration Nirāḷasthānadalli āpyāyanavillade
hoyittadēnembenayyā?
Halavu nāmavādeyallā!
Candacandada caritranalla nillu māṇu.
Nim'miccheya paḍedarem'mavaru.
Intaha dēvanu antaha dēvanu emba nāma urisadu,
olle kāṇā guhēśvarā.
Hindi Translation निराला स्थान में बिना आप्यायन गया कहना क्या?
कई नाम हुए न!
सुंदर सुंदर कई चरित्र नहीं, रुक, मत!
तुम्हारी इच्छा प्राप्त किये हमारे।
ऐसा देव, कैसा देव कहना
नाम नहीं, नहीं चाहिए, नहीं देखो गुहेश्वरा ।
Translated by: Eswara Sharma M and Govindarao B N
Tamil Translation சரணத்தலத்தில் நிறைவு இன்றிச் சென்றதை என்னென்பேன்?
பல பெயர்களைப் பெற்றாயன்றோ!
அழகிய புனைவுகள்! அகற்றுவாய், தடுப்பாய்
சரணர் உன் சொரூபத்தை உணர்ந்தவர்கள்
இக்கடவுள் அக்கடவுள் எனும் பெயர் தக்கதன்று
அதனை நீ ஏலாய் காணாய் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಪ್ಯಾಯನ = ಪರಮ ತೃಪ್ತಿ, ಪರಮ ಆನಂದ; ಇಚ್ಚೆಯ = ಸ್ವರೂಪವ; ಉರಿಸದು = ಸಲ್ಲದು; ಎಮ್ಮವರು = ಶರಣರು, ಅನುಭವಿಗಳು; ನಿರಾಳ = ನಿಷ್ಕಲದೇವ; ನಿರಾಳಸ್ಥಾನ = ಆ ದೇವನ ಅನುಭೂತಿ ಪಡೆವ ಶರಣಸ್ಥಲ; ಪಡೆದರು = ಅನುಭವಿಸಿದರು;
Written by: Sri Siddeswara Swamiji, Vijayapura